
20th April 2025
ಕುಷ್ಟಗಿ : ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ. ಕಿಶನ್ ರಾವ್ ವಕೀಲರು ಬನ್ನಿಗೋಳ ಇವರ ಧರ್ಮಪತ್ನಿ ಶ್ರೀಮತಿ ಕುಂಕುಮ ಸೌಭಾಗ್ಯವತಿ ರುಕ್ಮಿಣಿ ಬಾಯಿ (93) ಅವರು ಇಂದು ದಿನಾಂಕ 20-04-2025 ಭಾನುವಾರ ಮಧ್ಯಾಹ್ನ 3:00 ಗಂಟೆಗೆ ಸ್ವರ್ಗಸ್ತರಾಗಿರುತ್ತಾರೆ.
ಮೃತರಿಗೆ 5 ಜನ ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಕುಷ್ಟಗಿ ಕ್ಷೇತ್ರದ ಶಾಸಕರಾದ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಎಚ್ ಪಾಟೀಲ್ ಹಾಗೂ ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಾಜಿ ಶಾಸಕರಾದ ಕೆ ಶರಣಪ್ಪ ವಕೀಲರು ಹಾಗೂ ಬಿ. ಕಿಶನ್ ರಾವ್ ವಕೀಲರ ಅಭಿಮಾನಿಗಳು ಮೃತರಾದ ಶ್ರೀಮತಿ ರುಕ್ಮಿಣಿಬಾಯಿ ಅವರ ಅಂತಿಮ ದರ್ಶನ ಪಡೆದರು.
ಮೃತರ ಅಂತ್ಯಕ್ರಿಯೆಯು ಇಂದು ರಾತ್ರಿ 8-00 ಗಂಟೆಗೆ ನಗರದ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಸದ್ಗತಿ ಪ್ರಾಪ್ತಿಯಾಗಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ.
ಕುಷ್ಟಗಿ ನಗರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ. ಕಿಶನ್ ರಾವ್ ವಕೀಲರು ಬನ್ನಿಗೋಳ ಇವರ ಧರ್ಮಪತ್ನಿ ಶ್ರೀಮತಿ ಕುಂಕುಮ ಸೌಭಾಗ್ಯವತಿ ರುಕ್ಮಿಣಿ ಬಾಯಿ (93) ಅವರು ಇಂದು ಮಧ್ಯಾಹ್ನ 3:00 ಗಂಟೆಗೆ ಸ್ವರ್ಗಸ್ತರಾಗಿರುತ್ತಾರೆ.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ